ನೃಸಿಂಹ ಶತಕವು
ಸೀಸ ಪದ್ಯಗಳು)
(ಪ್ರತಿಯೊಂದು ಪದ್ಯದ ಕಡೆಯಲ್ಲಿಯೂ ಭೂಷಣ ವಿಕಾಸ ಶ್ರೀ ಧರ್ಮಪುರಿನಿವಾಸ ದುಷ್ಟಸಂಹಾರ ನರಸಿಂಹ ದುರಿತದೂರ ಎಂದು ಸೇರಿಸಿ ಓದಬೇಕು)
ಶ್ರೀ ಮನೋಹರ ಸುರಾರ್ಚಿತ ಸಿಂದುಗಂಭೀರ ಭಕ್ತವತ್ಸಲ ಕೋಟಿಭಾನು ತೇಜ|
ಕಂಜನೇತ್ರ ಹಿರಣ್ಯಕಶ್ಯಪಾಂತಕ ಶೂರ ಸಾಧುರಕ್ಷಣ ಶಂಕಚಕ್ರಹಸ್ತ||
ಪ್ರಹ್ಲಾದವರದ ಪಾಪದ್ವಂಸ ಸರ್ವೇಶ ಕ್ಷೀರಸಾಗರಶಯನ ಕೃಷ್ಣವರ್ಣ|
ಪಕ್ಷಿವಾಹನ ನೀಲಭ್ರಮರ ಕುಂತಲ ಜಾಲ ಪಲ್ಲವಾರುಣ ಪಾದಪದ್ಮಯುಗಳ||
ಚಾರುಶ್ರೀಚಂದನಾಗರು ಚರ್ಚಿತಾಂಗ ಕುಂದಕುಟ್ಮಿಲ ದಂತ ವೈಕುಂಠಧಾಮ|
ದುಷ್ಟಸಂಹಾರ ನರಸಿಂಹ ದುರಿತದೂರ (೧)
ಪದ್ಮಲೋಚನ ಸೀಸಮದ್ಯಶತಕದ ನುತಿಯ ಪೇಳ್ಲೆಳಸಿದೆನಯ್ಯ ಕೇಳು ಹಿತದಿ |
ಗಣ ಯತಿ ಪ್ರಾಸ ಲಕ್ಷಣವ ಕಂಡವನಲ್ಲ ಪಂಚಕಾವ್ಯ ಶ್ಲೋಕ ಪಠಿಸಲಿಲ್ಲ ||
ಅಮರಕಾಂಡತ್ರಯವ ಭ್ರಮೆಯೊಳೋದಿರಲಿಲ್ಲ ಶಾಸ್ತ್ರೀಯ ಗ್ರಂಥಗಳ ಸವಿಯಲಿಲ್ಲ |
ನಿನ್ನ ಕಟಾಕ್ಷದಿಂದೊರೆವೆ ನಿರ್ಮಲದಿಂದ ಪ್ರಜ್ನ್ಯೆಯೊಂದುತಲಲ್ಲ ಪಕ್ಷಿಗಮನ ||
ತಪ್ಪುಬೀಳಲ್ಕೆ ಸದ್ಭಕ್ತಿ ತಗ್ಗದೆಂದು ಕಬ್ಬುಡೊಂಕಾಗಲದರ ಸವಿ ಕಡಿಮೆಯಲ್ಲ ||