ಶನಿವಾರ, ಸೆಪ್ಟೆಂಬರ್ 6, 2008

ಮಗುವಿನ ಮೈಮೆಯ ಒಂದು ಗೀತೆ

ಎಲ್ಲಡಗಿರುವೆ ದೇವ! ಸಲ್ಲಲಿತ ಸದ್ಭಾವ!ಎಲ್ಲೆಲ್ಲಿಯಂ ಕಾಣೊಲೊಲ್ಲೆ! ಮಹಾದೇವ!ಜಗದೊಳಗೆ ನೀನಿಹೆಯ ಜಗವು ನಿನ್ನಲ್ಲಿಹುದೇ?ಜಗತೀವಲಯದಿಂದ ಹೊರಗೆ ನೀನಿರುತಿಹೆಯ?ಜಗದೊಳಣುರೇಣು ತೃಣಕಾಷ್ಟಗಳೊಳಿರೆ ನೀನುಭಗವಂತ!ನೀನಿರುವ ಬಗೆಯನರಿಯೆನು ಜೀಯ!ಪಳಪಳನೆ ಸುರಿಯುವಾ ಸಲಿಲದೊಳಡಗಿಹೆಯ!ಜಲವನುಂ ಬಿಸಿಲು ಬೆಳದಿಂಗಳನ್ನನುಭವಿಸೆ,ತೊಳಗುತಿರುತಿಹ ನಿನ್ನ ನೆಲೆಯ ಭಾವಿಸಲರಿಯೆ!ಕುಸುಮದಲ್ಲಡಗಿರುವ ಸುಮಗಂಧದಲ್ಲಿಹೆಯ!ಕುಸುಮವನು ಮೂಸಿಯುಂ ನಿನ್ನ ಸುಳಿವನ್ನರಿಯೆ.ಎಸೆವ ಮಧುಮಾಸದಾ ವನದ ಸೊಬಗಿನೊಳಿಹೆಯ!ವಸುಮತಿಯೊಳದ ಕಂಡು ನಿನ್ನ ನಾ ಕಾಣದಿಹೆ!ಉರಿವ ಬೇಸಿಗೆಯಲ್ಲಿ ಬಳಲಿರುವ ಸಮಯದಲಿ,ಮರದ ನೆರಳಿನೊಳೆನ್ನ ಮೈ ತೆಗೆದು ಕುಳಿತಾಗ,ಹರುಷ ಬೀರುವ ಮರದ ಮಾರುತನೊಳಡಗಿಹೆಯ!ನಿರುತ ನಾನಾಸುಖವನರಿತು ನಿನ್ನನ್ನರಿಯೆ!ಗಾನವನು ಪಾಡುತಿರೆ ಮೈ ಮರೆಯುವಂದದೊಳುಮಾನಸಕೆ ಮುದವೀವ ಸಂಗೀತದಲ್ಲಿಹೆಯ !ಗಾನವಿದ್ಯೆಯ ಸುಖವನನುಭವಿಸಿರಲು ನಾನುಗಾನಲೋಲನೆ! ನಿನ್ನ ಕಾಣದಿರುವೆನು ಗುರುವೆ!ಅಣುವಿನಲ್ಲಣುವಾಗಿ ಪಿರಿದರೊಳು ಪಿರಿದಾಗಿ,ಘನಮಹಿಮೆಯಿಂ ಜಗದೆ ನೀ ಕಾಣುತಿರುವೆ.ತನುವಿನಲ್ಲಿಹೆ ನಾನು ಎನ್ನೊಳಡಗಿಹೆ ನೀನುಮನದೊಳೆನ್ನನ್ನರಿಯೆ ನಿನ್ನನ್ನರಿವೆನು ನಾನು.ಮುನ್ನಮನೆಯೊಳಿಹುದನು ಹೊರಗೆ ಹುಡುಕುವ ತೆರದಿಎನ್ನೊಳಡಗಿಹ ನಿನ್ನ ಕಾಣದಿರುವೆನು ಬೇಗ.ಇನ್ನು ಬೇಡುವೆನಂಧಕಾರದರಿವೆಯನೊಗೆದುಎನ್ನ ಮನದಲಿ ಜ್ನಾನ ದೀಪವನು ಬೆಳಗಿಪುದು.ತರಣಿಯೋರ್ವನು ಜಲದ ಕೋಟಿಬಿಂದುಗಳಲ್ಲಿಮೆರೆಯುವಂದದಿ ಸಕಲ ವಸ್ತುಗಳೊಳಿರುತಿರುವೆಮೊರೆಯಿಡುವೆನಿನ್ನಲ್ಲಿ ಕರುಣದೊಳು ಮೈದೋರಿ,ಪೊರೆವುದೆನ್ನನು ರಾಮ! ವರದ ಚಂಪಕಧಾಮ!
-ವೈ.ಎಸ್.ಜಿ.

ಕಾಮೆಂಟ್‌ಗಳಿಲ್ಲ: